ಹೆಂಡತಿಯೊಬ್ಬಳು ಮನೆಯೊಳಗಿದ್ದರೆ…!

ಈ ಲೇಖನದ ಹಿಂದಿನ ಸ್ಫೂರ್ತಿ ಪತಿರಾಯರ ಗೆಳೆಯರೊಬ್ಬರು ಬರೆದ ಈ ಬ್ಲಾಗ್ ಪೋಸ್ಟ್. ಬರಹ ಬಹಳ ಹಾಸ್ಯಾಸ್ಪದವಾಗಿದೆ ನಿಜ, ಆದರೆ ಅಷ್ಟೇ ಉತ್ತೇಜಿತವಾಗಿಯೂ ಇದೆ. ಇಂತಹ ಒಂದು ಪ್ರತ್ಯುತ್ತರವನ್ನು ಬೇಡಿ-ಕೇಳುತ್ತಿರುವ ಬರಹವನ್ನು ಓದಿ ಯಾರು ತಾನೆ ಸುಮ್ಮನಿರಬಲ್ಲರು? ಹಲವಾರು ಗಂಡಸರ ಈ ಸಾಮನ್ಯ ಪ್ರಿಯ ಚರ್ಚೆಯನ್ನು ಕೇಳಿರುವ ನಾನು, ಅವರವರ ಹೆಂಡತಿಯರ ಪರವಾಗಿ, ಒಂದು ಹೆಣ್ಣಿನ ದೃಷ್ಟಿಕೋಣದಿಂದ, ಇದಕ್ಕೆ ಒಂದು ಉತ್ತರವನ್ನು ಬರೆಯಲು ನಿರ್ಧರಿಸಿದೆ.

“ಹೆಂಡತಿಯೊಬ್ಬಳು ಮನೆಯೊಳಗಿದ್ದರೆ ನನಗದು ಕೋಟಿ ರುಪಾಯಿ” – ಎಂದು ಹೇಳಿದ ಕೆ. ಎಸ್. ನರಸಿಂಹ ಸ್ವಾಮಿ ಅವರು ನನ್ನ ಪ್ರಕಾರ ಬಹಳ ಬುದ್ಧಿವಂತರು – ಅವರಿಗೆ ತಮ್ಮ ಹೆಂಡತಿಯನ್ನು ಖುಷಿಯಾಗಿ ಇಟ್ಟು, ಆ ಮೂಲಕ ತಾವೂ ಖುಷಿಯಾಗಿರುವ ವಿಧಾನ ಚೆನ್ನಾಗಿ ತಿಳಿದಿತ್ತು ಅಂತ ಕಾಣುತ್ತೆ. ಈ ಗೆಳೆಯರ ಲೇಖನದ ಪ್ರಕಾರ ಹೆಂಡತಿ ಅವಳ ತವರು ಮನೆಗೆ ಹೋದರೆ ಗಂಡಸರಿಗೆ ಎಲ್ಲಿಲ್ಲದ ಖುಷಿ – ಕಾರಣ – ಅವರಿಗೆ ಮದುವೆಯಾದ ಮೇಲೆ ಕಳೆದುಹೋಗಿದ್ದ ಸ್ವಾತಂತ್ರ ಮರಳಿ ಸಿಕ್ಕಂತೆ ಆಗುವುದು! ಅವರಿಗೆ ಎಲ್ಲೋ ಕಳುವಾದ bachelorhood ಮತ್ತೆ ಕೈಗೆ ಸಿಗುವುದಂತೆ! ಎಂತಹ ವಿಪರ್ಯಾಸವಲ್ಲವೇ?   ಮದುವೆ ಆದಾಗ ತಾನು ಬೆಳೆದ ಮನೆ, ಜನ, ತನ್ನ ತಾಯಿ ತಂದೆ, ಸಂಗಾತಿ ಗೆಳೆಯರು, ತಾನು ಇಷ್ಟ ಪಟ್ಟಿರುವ ವಸ್ತುಗಳು, ವಾತಾವರಣ, ತನ್ನ ತಾಯಿಯ ಪ್ರೀತಿಯ ಕೈ ತುತ್ತು, ತಂದೆಯ ಮಮತೆಯ ಉಡುಗೊರೆಗಳು, ಅಕ್ಕ ತಂಗಿಯರ ಜೊತೆ ಹಂಚಿಕೊಂಡು ಬೆಳೆದ ಉತ್ಸಾಹ – ಇವೆಲ್ಲವನ್ನೂ ಕಳೆದುಕೊಂಡು, ಬಿಟ್ಟು ಬರುವುದು ಹೆಣ್ಣು/ ಹೆಂಡತಿ. ತಮ್ಮ ಮನೆಯಲ್ಲೇ ರಾಜಾರೋಷವಾಗಿ, ತಮ್ಮ ತಾಯಿಯ ಮಮಕಾರದ ಅನುಪಮೇಯವಾದ ಕೈ-ಅಡಿಗೆಯನ್ನು ಸವಿಸುತ್ತ, ತಮ್ಮ ಇಷ್ಟದ ಯಜಮಾನತ್ವದ ಜೀವನವನ್ನು ಮುಂದೆಯೂ ಸಾಗಿಸುವರು ಗಂಡಸರು/ ಗಂಡಂದಿರು – ಇಲ್ಲಿ ಕಳೆದುಕೊಳ್ಳುವವರು ಯಾರು, ಗಳಿಸುವವರು ಯಾರು ಅಂತ ನೀವೇ ಯೋಚನೆ ಮಾಡಬಹುದು!

ಇನ್ನು ಹೆಂಡತಿ ಇಲ್ಲದಿದ್ದರೆ ಇವರಿಗೆ ಮಾಡಲು ಸಿಗುವ ಕಾರ್ಯಗಳ ಅವಕಾಶಗಳನ್ನು ನೋಡೋಣ  – ಟಿ.ವಿ ಧಾರಾವಾಹಿಗಳ ಭರಾಟೆ ಇಲ್ಲವಂತೆ! ಇದೆಷ್ಟು ನಿಜ? ನನಗಂತೂ ಈ ಧಾರಾವಾಹಿಗಳನ್ನು ಕಂಡರೆ ನಮ್ಮ ಮನೆಯವರಿಗಿಂತ ಜಾಸ್ತಿ ಕಿರಿ ಕಿರಿ ಆಗುತ್ತೆ! ಎಲ್ಲಾ ಹೆಂಡತಿಯರು ಈ ತರಹ ದೈನಂದಿನ ಧಾರವಾಹಿ ನೋಡೋಕ್ಕೆ ಕಾಯ್ತಾರೆ ಅನ್ನೋದು ಸುಳ್ಳು! ಅದೇ ವಾದ ಹಿಡಿದರೆ ಅಮ್ಮನ ಮನೆಯಲ್ಲಿ ನೋಡಿ ಆನಂದಿಸುತ್ತಿದ್ದ ಕಾರ್ಯಕ್ರಮಗಳನ್ನು ನೋಡುವ ಸ್ವಾತಂತ್ರ ಹುಡುಗಿಯರಿಗೆ ಇಲ್ಲಿ ಇರುವುದಿಲ್ಲ – ಅತ್ತೆ ಮಾವಂದಿರು ಅವರ ಮೆಚ್ಚಿನ ಸೀರಿಯಲ್ ನೋಡುತ್ತಿರಬಹುದು – ಇವರಿಗೆ Indian Idol ಅಥವಾ tennis match ಅಥವಾ movie ನೋಡುವ ಉತ್ಸಾಹ ಇದ್ದರೆ ಅದು ಈಡೇರುವುದೇ? ಇಲ್ಲಿ ಹೆಂಡತಿಯ ಸ್ವಾತಂತ್ರಕ್ಕೂ ಕಡಿವಾಣ ಬೀಳುತ್ತಿಲವೇ? ಅಥವಾ ನಮಗೆ ಯಾವುದೇ ಗಲಾಟೆ ಇಲ್ಲದೆ ಶಾಂತಿಯಲ್ಲಿ ಪುಸ್ತಕ ಓದುವ ಹವ್ಯಾಸವೋ ಅಥವಾ ಹಾಡು ಕೇಳುವ/ ಹೇಳುವ ಇಚ್ಛಯೊ ಇದ್ದರೆ ಅದು ಮಾಡಲು ಕಷ್ಟವಾಗುತ್ತದೆ ಅಲ್ಲವೇ?  ಗಂಡನಿಗೆ choice ಕಡಿಮೆಯಾದರೆ ಹೆಂಡತಿಗೆ ಆ choice ಇನ್ನೂ ಕಡಿಮೆ!

ಇನ್ನು ತಿನ್ನುವ/ ತಿನ್ನಿಸುವ ಸುದ್ದಿಗೆ ಬರೋಣ – ಈಗಿನ ಕಾಲದಲ್ಲಿ ಹುಡುಗಿಯರು ಮದುವೆಯ ಮುಂಚೆ ಅಡಿಗೆ ಕಲಿತಿರುವುದು ಕಡಿಮೆ – ಏಕೆಂದರೆ ಹುಡುಗರ ಹಾಗೆ ಹುಡುಗಿಯರೂ ಬಿ.ಇ/ ಬಿ. ಕಾಮ್ ಮುಗಿಸಿ ಕೆಲಸಕ್ಕೆ ಸೇರಿ ಬೆಳಗ್ಗಿಂದ ಸಂಜೆಯವರೆಗೆ ದುಡಿದು ಸೋತು ಬೇಸತ್ತು ಮನೆಗೆ ಬರುತ್ತಾರೆ – ಎಲ್ಲರ ಹಾಗೆ weekend ಅಂದರೆ ಅವರಿಗೂ ಆಸೆಯಿಂದ ಮುನ್ನೋಡುವ, ಒಂದು relax ಮಾಡುವ ಅವಕಾಶ.  ಆದರೆ ಅದೇ ಹುಡುಗಿಯರು ಮದುವೆಯಾದ ಮೇಲೆ ದಿನನಿತ್ಯ ಆಫೀಸ್ ಅಲ್ಲಿ ಕೆಲಸ ಮಾಡುವುದಲ್ಲದೆ ಬೆಳಿಗ್ಗೆ-ಸಂಜೆ ಅಡಿಗೆ ಮನೆಯಲ್ಲಿ ನಿಂತು ಅತ್ತೆಗೆ ಸಹಾಯ ಮಾಡುವುದೋ ಅಥವಾ ಕೆಲವೊಮ್ಮೆ ತಾವೇ ಪೂರ್ತಿ ಅಡಿಗೆ ಮಾಡುವುದೋ ಒಂದು ಅನಿವಾರ್ಯತೆ .  ಎಂದಾದರೂ ಒಂದು ದಿನ ಅಡಿಗೆ ಬೇಜಾರಾಗಿದೆ ಹೊರಗೆ ಹೋಗಿ ತಿನ್ನೋಣವೆಂದರೆ ಅತ್ತೆ ಮಾವನಿಗೆ ಕಾರಣಗಳು ಹೇಳಬೇಕು, ಗಂಡನಿಗೆ ಅವತ್ತು ಹೊರಗೆ ತಿನ್ನುವ mood ಇರದೇ ಹೋಗಬಹುದು ಇತ್ಯಾದಿ ಇತ್ಯಾದಿ.  weekday ಇರಲಿ weekend ಇರಲಿ ಅಡಿಗೆ ಮನೆಯಿಂದ ಪುರುಸೋತ್ತು ಇಲ್ಲ – ವಿಧ ವಿಧವಾದ ಭಕ್ಷ್ಯಗಳನ್ನು ಇಳಿಸುತ್ತಿರಬೇಕು! ಒಮ್ಮೊಮ್ಮೆ ಅನ್ನಿಸುತ್ತೆ – ಯಾಕಾದ್ರು ಹೊಟ್ಟೆ ಕೊಟ್ಟನೋ ದೇವರು ಅಂತ – ಬರೀ ಮಾಡೋದು, ತಿನ್ನೋದು, ಬಳಿಯೊದರಲ್ಲೇ ಅರ್ಧ ಜೀವನ ಕಳೆದುಹೊಗುತ್ತಲ್ಲಾ?!

ಇಷ್ಟೆಲ್ಲಾ ಹೇಳ್ತಾರಲ್ಲ – ಇವರಿಗೆ ತಿಳಿದಿದೆಯೇ – ಹೆಂಡತೀರು ತವರು ಮನೆಗೆ ಹೋಗುವುದಕ್ಕೆ ಕಾತರಿಸುವುದು ಏತಕ್ಕೆ ಎಂದು? ಎಂದಾದರೂ ಈ ವಿಷಯದ ಬಗ್ಗೆ ಗಮನ ಹರಿಸಿದ್ದಾರೆಯೇ? ಎಲ್ಲಿ ಅದಕ್ಕೆ ಅವಕಾಶವೇ ಇಲ್ಲವಲ್ಲ – ಬರೀ celebrate ಮಾಡೋದಕ್ಕೆ ಸಮಯ ಸಾಲದು ಪಾಪ! ಹುಡುಗಿಯರು ಧಾವಿಸಿ ತವರಿಗೆ ಬರುವುದು ಅದೇ ಕಳೆದುಹೋದ ಸ್ವಾತಂತ್ರವನ್ನು ಕೆಲ ಕ್ಷಣ ಮರಳಿ ಪಡೆಯಲು – ಸೋಫಾದ ಮೇಲೆ ಕಾಲು ಚಾಚಿ ಮಲಗಿ ಟಿ.ವಿ ನೋಡಲು, ಸುಸ್ತಾಗಿ ಆಫೀಸಿನಿಂದ ಬಂದಾಗ ಕಾದಿರುವ ಆ ಬಿಸಿ ಕಾಫಿ ಕುಡಿಯಲು, ನಾಳಿನ ಅಡಿಗೆಯ ಚಿಂತೆಯಿಲ್ಲದೆ ನೆಮ್ಮದಿಯ ನಿದ್ರೆ ಮಾಡಲು, ಇಷ್ಟವಾದ ತಿಂಡಿ ತಿನಿಸುಗಳನ್ನು ಅಮ್ಮನ ಕೈಯಲ್ಲಿ ಮಾಡಿಸಿಕೊಂಡು ತಿನ್ನಲು, ಹಿಂದಿನಂತೆ ಸ್ವತಂತ್ರವಾಗಿ ತನಗೆ ಇಷ್ಟ ಬಂದ ಕಡೆಗೆ ಹೋಗಿ ಬರಲು, ತನ್ನ ಸ್ನೇಹಿತರನ್ನು ಭೇಟಿ ಮಾಡಿ ಹರಟೆ ಹೊಡೆಯಲು – ಮದುವೆಗೆ ಮುಂಚೆ ಅವಳಿಗೂ ಒಂದು ಅವಳದೇ ಆದ ಜಗತ್ತು, ಜೀವನ ಇತ್ತಲವೇ – ಅದರ ಅವಶೇಷಗಳನ್ನು ಹುಡುಕುತ್ತಾಳೆ ಅವಳು.    ಇದನ್ನು ನಿಮ್ಮ ಗಂಡನಿಗೆ ಬಿಡಿಸಿ ಹೇಳಿಬಿಡಿ – ಎಲ್ಲಿಲ್ಲದ ಹೊಟ್ಟೆ ಉರಿ ಅವರಿಗೆ! ಅದೂ especially ಎಂದಾದರೂ ಬೇಜಾರು ಆಗಿ, ಅವರ ಯಾರೂ ಗೆಳೆಯರು ಬಿಡುವಿಲ್ಲದೆ ಹೋದ  ಸಂದರ್ಭದಲ್ಲಿ ಹೆಂಡತಿ ತವರಿನಲ್ಲಿ ಅವಳ ಗೆಳಯರೊಡನೆ ಕಾಲ ಕಳೆಯುತಿದ್ದು ಇವರಿಗೆ ಫೋನ್ ಮಾಡಲು ಬಿಡುವಿಲ್ಲವೆಂದು ವಿಷಯ ತಿಳಿಯಬೇಕು – ಹೊಟ್ಟೆ ಉರಿಯಿಂದ ಸುಟ್ಟ ವಾಸನೆಯು ಬಂದರೂ ಬರಬಹುದು!

ಕೊನೆಗೆ ಈ ನನ್ನ ಉತ್ತರದ ನಿರ್ಣಯ ಏನು? ಈ ಕೆಲ – ಹೆಂಡತಿ ತವರಿಗೆ ಹೋದ – ದಿನಗಳ ಆನಂದ ಅವಳಿಗೂ ಶಾಶ್ವತವಲ್ಲ ಇವರಿಗೂ ಲಭಿಸಿದಲ್ಲ. ಆದ್ದರಿಂದ ಇದನ್ನು ಅರಿತು ಸುಮ್ಮನೆ ಅವಳನ್ನು ತವರಿಗೆ ಕಳಿಸಲು ಹಾತೊರೆಯದೆ, ಇಬ್ಬರೂ ಒಟ್ಟಿಗೆ ಇದ್ದು, ಪರಸ್ಪರ ಆಸೆ-ಆಕಾಂಕ್ಷೆಗಳನ್ನು ತಿಳಿದು, ಎರಡೂ ಕಡೆ adjustments ಮಾಡಿಕೊಂಡು, ಸರಸ-ವಿರಸಗಳ ಪ್ರೀತಿಯ ಸಮನ್ವಯದ ಬಾಳು ನಡೆಸುವುದನ್ನು ತಮ್ಮ ಗುರಿಯಾಗಿಸಿಕೊಳ್ಳಬೇಕು.  ಏನಂತೀರಿ? 🙂

8 thoughts on “ಹೆಂಡತಿಯೊಬ್ಬಳು ಮನೆಯೊಳಗಿದ್ದರೆ…!

  1. Namaskara Madam…Lekhana chennagide…bareyuva shaili haagu presentation kooda bahala chennagide…

    Keep it up….

    Regards
    Simhan

    thank you! 🙂 nimma lekhana-nu bahala chennagittu… adakke uttara bareedira irokke aagalilla 😀

  2. Hello
    Namaskara Madam…Lekhana chennagide………. Nivu Kottiruva Salahe hage neduvaru yemba nabike nimage ideye. Adare kelavaru gandassre agali hennu makkale agali arth a madikolluva manobavane yarigu iruvudilla. Nivu kelavarannu thiddalu prayathnisi baravanigeyalli halla.
    Regard
    MS
    lekhanavannu Odi nimma anisike tiLisidakke dhanyavaadagaLu! illi naanu yaarannu tiddalu prayatnisuttilla… naanu Odida aa lekhanakke, ondu heNNaagi nanna abhipraayavannu tiLiside ashTe… ellarigu avaravarade abhipraayagaLirutte 🙂

  3. Hello medam,
    Nivu nanna snehithe endu tilidu eluttiddene. bejaru madikollabedi nivu helirivudi sariye gandasaru nedudhu kolluhudu hageya adare namma balya snehitha snehitheya ra joteyalli navu mathanadabeku nodabeku yemba yalla asegalu bare thukku hidida kabinada buttiyanthe. ekendare maduveyada mele yara jothe mathanadidaru thappu yendu tiluyuva janarige yenu yeluvudu. nanna manada novina ondu kiru kambaniya nimma munde heluva bayakeya munde e rithi kelabekayithu bejaragiddare kshame erali.

    bejaarEnu illa… taavu kshameyaachisuva avashyakatheyu illa!

  4. ಚೆನ್ನಾದ ಉತ್ತರ. ಮದುವೆಗಿನ ಮೊದಲು ಜೀವನ ಹೇಗಿತ್ತೋ ಅದನ್ನು ಪುನಃ ತರಲು ಸಾಧ್ಯವಿಲ್ಲ. ಅದು ಮದುವೆಗೆ ಮುಂಚೆಯೇ ತಿಳಿದಿರದ ಸಂಗತಿಯೇನಲ್ಲ. ಮತ್ತೆ ಅದರ ಬಗ್ಗೆ ಕರುಬಿ ಏನು ಪ್ರಯೋಜನ? bachelor ಆಗಿರಲು ಅಷ್ಟು ಮನಸಿದ್ದರೆ ಮದುವೆಯೇಕೆ ಬೇಕು?
    ಇನ್ನು TV ವಿಷಯ. ನನಗಂತೂ ಆ ಆಮೆ ಗತಿಯಲ್ಲಿ ವರ್ಷಗಟ್ಟಲೆ ತಲೆ ಬುಡ ಇಲ್ಲದೆ ನಡೆಯುವ ಧಾರಾವಾಹಿಗಳನ್ನು ಕಂಡರಾಗದು. ಬೇರೇನಾದರೂ ನೋಡೋಣ ಎಂದರೆ ರಿಮೋಟು ಯಜಮಾನರ ಕೈಯಲ್ಲಿ ಇರುತ್ತದೆ. ಹತ್ತು ನಿಮಿಷ ನನ್ನ ಕಾರ್ಯಕ್ರಮ ನಡೆದು ಜಾಹೀರಾತು ಬಂದರೆ ತಕ್ಷಣ channel change!
    ಏನೇ ಇರಲಿ, ನಿಮ್ಮ ಬರಹದಿಂದ ಆ simhansden ಬರಹಕ್ಕೆ ಒಳ್ಳೆ ಪ್ರಚಾರ ಸಿಕ್ಕಂತಾಯಿತು ಬಿಡಿ.

  5. I’m Prakash Shetty, cartoonist. Nimma ‘hendati ….’ baraha chennaagide. bahushaha nimage gottirabahudu. naanu ‘vaarekore’ patrike nadesi ,nilisidde. adare janavari 2012 modala vaara ‘vaarelore’ ya visheshaanka baralide. Adakke e nimma baraha balasikollale? please reply to my email-prakashetty@gmail.com

Leave a comment