ಒಂಟಿತನ ಮತ್ತು ದೇವರು

ಜೀವನ ಎಷ್ಟು ವಿಚಿತ್ರ ಅಲ್ಲವೇ? ಹೇಳೋದಕ್ಕೆ ನಾವು ಸಮಾಜ ಜೀವಿಗಳು… ನಮಗೆ ಸಂಸಾರ – ಅಪ್ಪ, ಅಮ್ಮ, ಅಕ್ಕ, ತಂಗಿ, ಅಣ್ಣ, ತಮ್ಮ, ಗಂಡ, ಹೆಂಡತಿ, ಮಗ, ಮಗಳು, ಅಜ್ಜಿ, ತಾತ … ಹೀಗೆ ನೂರಾರು ಸಂಬಂಧಿಕರು; ಜೊತೆಗೆ ಶಾಲೆಯ, ಕಾಲೇಜಿನ ಸಹಪಾಠಿಗಳು, ಕೆಲಸದ ಸಹುದ್ಯೋಗಿಗಳು, ಅದಲ್ಲದೆ ಅಕ್ಕ-ಪಕ್ಕದ ಮನೆಯವರು, ದಾರಿಯಲ್ಲಿ ಹೋಗಿ ಬರುವಾಗ ಸಿಗುವ ಹಾಯ್-ಬೈ ಸ್ನೇಹಿತರು… ಅಬ್ಬ! ಅದೆಷ್ಟು ಜನ!

ಆದರೆ ದಿನದ ಕೆಲವು ಕ್ಷಣಗಳು ಇರುತ್ತವೆ – ನಮಗೆ ಯಾರು ಇಲ್ಲವೆನ್ನಿಸುತ್ತಾರೆ, ಯಾವುದೂ ಬೇಡವಾಗಿರುತ್ತದೆ – ನಾವು ಎಷ್ಟು ಒಬ್ಬಂಟಿಗರು ಎನ್ನುವ ಕಹಿ ಭಾವನೆ ನಮ್ಮ ಮನದ ತಿಳಿಯಲ್ಲಿ ಬೇಸರದ ಅಲೆಗಳನ್ನು ಎಬ್ಬಿಸುತ್ತದೆ. ಅದಕ್ಕೇ ಇರಬೇಕು ಮನುಷ್ಯ ಇಷ್ಟು ವೈಜ್ಞಾನಿಕವಾಗಿ ಹಾಗು ತಂತ್ರಜ್ಞಾನದಲ್ಲಿ ಮುಂದುವರಿದರೂ ಎಲ್ಲೋ ಒಂದು ಕಡೆ – ಆ ‘ದೇವನಿರುವನು’ ಎಂಬುದು ಒಂದು ನಿಶ್ಚಲ ಸತ್ಯ, ಎಂದು ಇನ್ನೂ ನಂಬಿದ್ದಾನೆ. ಜಗತ್ತಿನ ಎಲ್ಲಾ ಸಂಬಂಧಗಳ ಬಂಧನಗಳಿಂದ ಮುಕ್ತರಾಗಲು ನಾವು ದೇವರ ಮೊರೆ ಹೊಕ್ಕುತ್ತೇವೆ!

Advertisements