ಶ್ರದ್ಧೆಯಿಂದ ಮಾಡುವ ಶ್ರಾದ್ಧಾ – ಶ್ರದ್ಧಾ

 ಶ್ರದ್ಧಾ! ನಾವು ನಿನ್ನೆಯ ರಮಣೀಯ ಸಂಜೆಯನ್ನು ಕಳೆದದ್ದು ಈ ನಾಟಕವನ್ನು ನೋಡುತ್ತಾ. ಇದು ಪ್ರಸಿದ್ಧ radio jockey ವಿನಾಯಕ್ ಜೋಶಿಯ ಪ್ರಸ್ತುತಿ, ಅವರ ಇನ್ನಿಲ್ಲದ ತಂದೆಯ ನೆನಪಿನಲ್ಲಿ. ಕಳೆದ ವಾರ buzzintown -ನಲ್ಲಿ ನೋಡಿ, ಹೋಗಬಹುದು ಎಂದುಕೊಂಡಿದ್ದೆವು. ಆದರೆ ನಿನ್ನೆಯವರೆಗೂ tickets ಕೊಂಡಿರಲಿಲ್ಲ. ನಿನ್ನೆ ಸಂಜೆ online tickets ಖರೀದಿ ಮಾಡಿದರು ಪತಿರಾಯರು. ಖರೀದಿಸಿದ 5 ನಿಮಿಷಕ್ಕೆ ಇಡೀ ಬೆಂಗಳೂರಿನಲ್ಲಿ ಧೋ ಎಂದು ಮಳೆ ಸುರಿಯತೊಡಗಿತು! ಇನ್ನಾಯಿತು, ನಮ್ಮ ಸಂಜೆಯ ಕಾರ್ಯಕ್ರಮ ಫಲಿಸಿದಂತೆ ಎಂದುಕೊಂಡೆವು! ಅದೃಷ್ಟವಶಾತ್ ಸುಮಾರು 6.30ರ ಹೊತ್ತಿಗೆ ಮಳೆಯು ಕಡಿಮೆ ಆಗುವ ಲಕ್ಷಣಗಳು ಕಂಡವು. ಬಿರ್ರನೆ ಮನೆಗೆ ಸೇರಿ, ಥಟ್ಟನೆ ರೆಡಿ ಆಗಿ ಹೊರಟೆವು. ನಾಟಕದ ಪ್ರದರ್ಶನ ಇದ್ದದ್ದು ಮರಡಿ ಸುಬ್ಬಯ್ಯ ಕಲ್ಯಾಣ ಮಂಟಪದ ಎದಿರು ಇರುವ  K.H. ಕಲಾ ಸೌದ -ದಲ್ಲಿ. ಮುಸ್ಸಂಜೆಯ ಮಳೆಯ ನಂತರ ರಾಮಾಂಜನೇಯ ದೇವಸ್ಥಾನದ ಬಳಿ ಇರುವ ಕಲಾ ಸೌದಾ-ದ ವಾತಾವರಣ ಅಮೋಘವಾಗಿತ್ತು! ತಣ್ಣನೆ ಗಾಳಿ, ಘಮ್ಮೆನ್ನುವ ಭೂಮಿ, ನಿಶ್ಚಲವಾದ ಪಾರದರ್ಶಕ ನಿಶೆಯಲ್ಲಿ ಮಳೆಯಲ್ಲಿ ಮಿಂದು ತೂಗುತಿದ್ದ ಹಸಿರು ಗಿಡ-ಮರಗಳು…  ಮನೋಹರವಾದ ಆ ಕ್ಷಣ ನನಗೆ ನಮ್ಮ KemmaNNugundiya  ಪ್ರವಾಸದ ನೆನಪು ತಂದಿತು! 🙂   
Shraddha - A kannada play directed by Vinayak Joshi

Shraddha - A kannada play directed by Vinayak Joshi

   7.30 ಕ್ಕೆ ಪ್ರಾರಂಭವಾಗಬೇಕಿದ್ದ ನಾಟಕವು 10 ನಿಮಿಷ ತಡವಾಗಿ ಶುರುವಾಯಿತು – ಬಹುಷಃ ಮಳೆಯ ಕಾರಣದಿಂದಿರಬಹುದು. ಹೊರಗಿನಿಂದ ಅಷ್ಟು ಸುಂದರವಾಗಿ ಕಂಡ ಕಲಾ ಸೌದವು ಒಳಗಿನಿಂದ ಅಷ್ಟೇನೂ ಹೇಳಿಕೊಳ್ಳುವ ಹಾಗೆ ಇರಲಿಲ್ಲ. ಸ್ವಚ್ಚತೆ, ಸೌಕರ್ಯಗಳ ಬಗ್ಗೆ – ಕನಿಷ್ಠ ಪಕ್ಷ ಒಂದು ನಾಟಕ ಅಥವಾ ಕಾರ್ಯಕ್ರಮ ಇರುವ ದಿನವಾದರೂ, ಇನ್ನಷ್ಟು ಗಮನ ಹರಿಸಬಹುದು ಎನ್ನುವ ಭಾವ ಮೂಡಿ ಬಂತು. ನಾಟಕ ಶುರುವಾದದ್ದು ತೆರೆಯ ಮೇಲೆ ಒಂದು ಚಿಕ್ಕ video  ತೋರಿಸುವ ಮುಖಾಂತರ – ಅದರಲ್ಲಿ ಕೆಲವರು ಅವರ ತಂದೆಯ ಬಗ್ಗೆ, ಅವರೊಡನೆ ಇವರುಗಳು ಹಂಚಿಕೊಂಡ ನೆನಪುಗಳ ಬಗ್ಗೆ ಇದ್ದಿತು. ಈ ವ್ಯಕ್ತಿಗಳು ಯಾರೆಂದು ತಿಳಿಯಲಿಲ್ಲ – ನಿರ್ದೇಶಕನ ಹಲವು ಗೆಳೆಯರಿರಬಹುದೇ ಅಥವಾ ನಾಟಕಕ್ಕೆ ಇವರ ನೆಂಟೇನಾದರೂ ಇದ್ದಿರಬಹುದೇ ಎಂದು ಊಹಿಸುತ್ತಿದ್ದೆವು – ಇದರ ಉತ್ತರ ಕೊನೆಗೂ ಸಿಗಿಲಿಲ್ಲ. 

Prabhakar Rao - as Sheenu, the son

   ನಾಟಕದ ರೂಪರೇಖೆ ಹೀಗಿತ್ತು – ಅದು ಒಳ-ಹೊಕ್ಕಿ ನೋಡ ಬಯಸಿದ್ದು ಒಬ್ಬ ತಂದೆ-ಮಗನ ಸಂಬಂಧದ ಸೂಕ್ಷ್ಮತೆಗಳನ್ನು – ಎರಡು ತಲೆಮಾರುಗಳ ವ್ಯಕ್ತಿತ್ವ, ಚಿಂತನೆಗಳ ನಡುವಿನಿ ಅಪಾರವಾದ ವ್ಯತ್ಯಾಸಗಳನ್ನು. ಸದಾ ಕಾಲ ಚೂಪು ಮೀಷೆಯನ್ನು ನೇವರಿಸಿಕೊಳ್ಳುವ ತಂದೆಯು, ಬಾಲ  ಗಂಗಾಧರ ತಿಲಕರ ಮೂಲ ತತ್ವಗಳಲ್ಲಿ ನಿಚ್ಚಳ ನಂಬಿಕೆ ಉಳ್ಳವರು ಹಾಗು ತಪ್ಪದೆ ಅದನ್ನು ಪಾಲಿಸುವವರು. ಅವರ ಜೀವನ ಶೈಲಿ ಬಹಳ ಶಿಸ್ತು, ಕಠಿಣ ಹಾಗು ಯಾವುದೇ ರೀತಿಯ ಭಾವನೆಗಳ ಅಭಿವ್ಯಕ್ತಿಗೆ ಅವಕಾಶ ನೀಡದಿರುವಂತದ್ದು. ಇದು ಮಗನಾದವನಿಗೆ ಅರ್ಥೈಸಿ ಜೀರ್ಣಿಸಿಕೊಳ್ಳುವುದು ಬಹಳ ಕಷ್ಟ. ತುಂಟತನದಿಂದ ಕೂಡಿದ ಬಾಲ್ಯ, ಕಸಿ-ವಿಸಿಯ ಯೌವ್ವನ ಮತ್ತು ಪಕ್ವ ಪಡೆದ ಪ್ರಾಯ – ಎಲ್ಲದರ ನಡುವೆ ಅವನು ಹಂಬಲಿಸಿದ್ದು ತಂದೆಯ ಪ್ರೀತಿಯ, ವಾತ್ಸಲ್ಯದ ತೋರಿಕೆಗಾಗಿ. ಕೊನೆಗೆ ಬೆಳೆದು ನಿಂತ ಮಗನು ನೌಕರಿಯ, ಭವಿಷ್ಯದ ಶೋಧೆಯಲ್ಲಿ ಮುಂಬೈ-ಗೆ ಹೊರಟಿ ನಿಲ್ಲುತ್ತಾನೆ . ಆಗಲಾದರೂ ತಂದೆಯು ಅವನ ಪ್ರೇಮ, ಕಾಳಜಿಗಳನ್ನು ಅಭಿವ್ಯಕ್ತಿಗೊಳಿಸುತ್ತಾನೆಯೇ? ಇದು ಈ ನಾಟಕದ ಅಂತ್ಯದ ದೃಶ್ಯ.  ಇದಷ್ಟನ್ನು ಮಗ ಶೀನು ನೆನೆಸಿಕೊಳ್ಳುವುದು ಬಹಳ ವರ್ಷಗಳ ನಂತರ ಅವರ ತಂದೆಯ ಶ್ರಾದ್ಧದ ದಿನದಂದು.  ಅವನು ಹೇಳುವಂತೆ ಈಗ ನಾವು ಮಾಡುವುದೇನು – ಬರಿಯ ಈ ಶ್ರಾದ್ಧ ಅಷ್ಟೇ – ಯಾರೋ ಶಾಸ್ತ್ರಿಗಳನ್ನು ಕರೆಸುತ್ತೇವೆ ಅವರೊಂದಿಷ್ಟು ಮಂತ್ರಗಳನ್ನು ಬಡಬಡಿಸುತ್ತಾರೆ – ನಾವು ಎಳ್ಳು ನೀರು ಹಾಕಿ ನಮ್ಮ ಕೆಲಸ ಮುಗಿಸುತ್ತೇವೆ. ಆದರೆ ಈ ಕಾರ್ಯವನ್ನು ಮಾಡುವಾಗ ಬೇಕಾಗಿರುವುದು ಶ್ರದ್ಧೆ. ಈ ಶ್ರದ್ಧಾ ಭಕ್ತಿಗಳಿಂದ ಮಾಡುವ ಶ್ರಾದ್ಧ-ವೇ ಶ್ರದ್ಧಾ!         

 ಒಟ್ಟಾರೆ ಈ ನಾಟಕ ನೋಡಿದ ಅನುಭವವು ಬೌದ್ಧಿಕವಾಗಿ ಉತ್ತೆಜಿತವಾಗಿಯೂ, ಮನಸ್ಸಿಗೆ ಮುದ ನೀಡುವಂಥದ್ದಾಗಿತ್ತು.   ಅವರ ತಂದೆಯ ಮೂರನೇ ವಾರ್ಷಿಕದ ಸಂದರ್ಭದಲ್ಲಿ ಒಂದು ಭಾವಪೂರ್ಣ ಶ್ರದ್ಧಾಂಜಲಿಯಾಗಿ ಅರ್ಪಿಸಿದ್ದ ವಿನಾಯಕ್ ಜೋಷಿಯವರ ಈ ನಾಟಕವು ಒಂದು ಒಳ್ಳೆಯ ಭಾವನಾತ್ಮಕ ಕೊಡುಗೆ ಎಂದು ಹೇಳಬಹುದು.  

with Vinayak Joshi, as the father

ಮಗ ಶೀನು-ವಿನ ಮುಖ್ಯ ಪಾತ್ರದಲ್ಲಿ ಅಭಿನಯಿಸಿದವರು ಶ್ರೀಮಾನ್ ಪ್ರಭಾಕರ್ ರಾವ್-ರವರು, ಹಾಗೂ ತಂದೆಯ ಪಾತ್ರ ನಿರ್ವಹಿಸಿ ನಾಟಕವನ್ನು ನಿರ್ದೇಶಿಸಿದವರು ನಮ್ಮ V +ನಾಯಕ, ವಿನಾಯಕ್ ಜೋಷಿ-ಅವರು. ವಿಭಿನ್ನವಾದ ಮನಸ್ಸಾಕ್ಷಿಯ ಪಾತ್ರ-ವಹಿಸಿದವರು ಅಭಿ.  ಪ್ರಭಾಕರ್-ರವರ ನಟನೆ ಅದ್ಭುತವಾಗಿತ್ತು – ಅವರ ಸಂವಾದದ ಶೈಲಿ, ಭಾವನೆಗಳನ್ನು ವ್ಯಕ್ತಪಡಿಸಿದ ರೀತಿ, ಅವರ ಇಡೀ ಪ್ರದರ್ಶನ ಮನದಟ್ಟುವ ಹಾಗಿತ್ತು. ಜೊತೆಗೆ ಬಾಲ್ಯದ ತುಂಟ ನೆನೆಪುಗಳನ್ನು ತೋರಿಸಲು ಉಪಯೋಗಿಸಿದ ಇಬ್ಬರು ಪುಟಾಣಿ ಪುಂಡರ ಪಾತ್ರ ಅತ್ಯಂತ ಪ್ರಿಯಕರವಾಗಿತ್ತು. ಅದರಲ್ಲೂ ಪುಟ್ಟ ಶೀನು-ವಿನ ಪಾತ್ರ ನಿರ್ವಹಿಸಿದ್ದ ತೇಜಸ್ ಎಲ್ಲರ ಮನಸ್ಸು ಕಳವು ಮಾಡಿದನು! ವಿನಾಯಕನ ಅಭಿನಯವು ಸಹ ಬಹಳ ಚೆನ್ನಾಗಿತ್ತು – ಆದರೆ ಅವನ ಧ್ವನಿ ಇನ್ನು ಸ್ವಲ್ಪ ಜೋರಾಗಿ ಮತ್ತು ಉಚ್ಚಾರಣೆ ಸ್ವಲ್ಪ ಸ್ಪಷ್ಟವಾಗಿ ಇದ್ದಿದ್ದರೆ ಇನ್ನು ರಂಗೇರುತಿತ್ತು. ಕೊನೆಯಲ್ಲೂ ಸಹ ಬದಲಾಗುತ್ತಿರುವ ನಮ್ಮ ಸಮಾಜ, ಅದರಲ್ಲಿನ ತಂದೆ-ತಾಯಿ-ಮಕ್ಕಳ ಸಂಬಂಧಗಳ ನಿಲುವು – ಇದರ ಬಗ್ಗೆ ಕೆಲವು ಪಿತೃ-ಪುತ್ರರ ಮಾತು-ಕಥೆಯ ಒಂದು ಸಣ್ಣ video ತೋರಿಸಲಾಯಿತು. ಮತ್ತೆ – ಇವರುಗಳು ಯಾರು, ಈ ನಾಟಕದ ಮೇಲೆ, ಪಾತ್ರಧಾರಿಗಳಿಗೆ ಇವರ ಸಂಬಂಧ ಏನು ಯಾವುದೂ ತಿಳಿಯದಾಗಿತ್ತು. ಇದನ್ನು ಸ್ವಲ್ಪ ವಿಸ್ತರಿಸಿದ್ದರೆ ನೋಡುಗರಿಗೆ ಇನ್ನು ಖುಷಿಯಾಗಿರುತಿತ್ತು ಅನ್ನಿಸುತ್ತೆ. ಜೊತೆಗೆ ನಾಟಕದ ಕೊನೆಯಲ್ಲಿ ವಿವಿಧ ಪಾತ್ರಧಾರಿಗಳ ಪರಿಚಯವೂ ಕೂಡ video -ದ ಮೂಲಕವೇ ತೋರಿಸಲಾಯಿತು. ಇದರ ಬದಲು ಪಾತ್ರಧಾರಿಗಳನ್ನು ರಂಗಸ್ಥಳಕ್ಕೆ ಕರೆದು ಅವರ ಪರಿಚಯ ಮಾಡಿಸಿದ್ದರೆ ಬಹಳ ಸೊಗಸಾಗಿರುತಿತ್ತು.   

Advertisements

2 thoughts on “ಶ್ರದ್ಧೆಯಿಂದ ಮಾಡುವ ಶ್ರಾದ್ಧಾ – ಶ್ರದ್ಧಾ

    • oh wow! neevu idanna odi ishta padteera anta expect-e madirlilla… tumba khushi aaytu! 😀
      nijakku naataka bahala chennagi moodi bandittu… naavu bahala ishta pattvi… munde innu ollolle prastutigalannu neevu tarteera anta aashisteevi 🙂

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s