ಕನ್ನಡ ಉಳಿಸಿ, ಕನ್ನಡ ಬೆಳೆಸಿ!

ಲೇಖನಕ್ಕೆ ಸಿಕ್ಕ ಪ್ರತಿಕ್ರಿಯೆ, ಪ್ರಶಂಸೆಯ ನಂತರ ಕನ್ನಡದಲ್ಲಿ ಇನ್ನೊಂದು ಲೇಖನ ಬರಿಯಬೇಕೆಂದು  ಬಹಳ ದಿನಗಳಿಂದ ಆಸೆಯಿತ್ತು. ಆದರೆ ಬರೆಯಲು ಯಾವುದೂ ಸೂಕ್ತವಾದ ವಿಷಯ ಸಿಕ್ಕಿರಲಿಲ್ಲ. ಕೊನೆಗೆ ಸ್ವಲ್ಪ ದಿನಗಳ ಹಿಂದೆ ಲೇಖನಕ್ಕೆ ಯೋಗ್ಯವಾದ ಒಂದು ವಿಷಯ ಸಿಕ್ಕಿತ್ತೆನ್ನಿಸಿತು. ಒಂದು ರಜೆಯ ದಿನದಂದು ಮಧ್ಯಾಹ್ನ ನಾನು ಹಾಗು ನನ್ನ ಪತಿ ಟಿ.ವಿ ನೋಡುತ್ತಿದ್ದೆವು. ಎಂದಿನಂತೆ ಒಂದು ಚಾನೆಲ್ ಅಲ್ಲಿ ನಿಲ್ಲದೆ ಒಂದರಿಂದ ಇನ್ನೊಂದಕ್ಕೆ ಎಗರುತ್ತಿದ್ದರು ಪತಿರಾಯರು. ಹೀಗೆ ಮಾಡುವಾಗ ಒಂದು ಕನ್ನಡದ ಚಾನೆಲ್ ಅಲ್ಲಿ ಪತಿಗೆ ಕಂಡದ್ದು ಅವರ ನೆಚ್ಚಿನ ರೇಡಿಯೋ jockey ವರ್ಷ! ಹಾಗಾಗಿ ಓಡುತಿದ್ದ ಗಾಡಿ ಅಲ್ಲಿಗೆ ನಿಂತಿತು 🙂   

ಅವಳು ನಡೆಸಿಕೊಡುತಿದ್ದುದು ‘ಸಾಲಕ್ಕೊಂದು ಸಲಾಂ’ ಎಂಬ ಕಾರ್ಯಕ್ರಮವನ್ನು. ೪ ಸ್ಪರ್ಧಿಗಳಿಗೆ ಕೇಳಿದ ಪ್ರಶ್ನೆಗಳಿಗೆ ಅವರು ಸರಿ ಉತ್ತರ ಕೊಡುತ್ತ ಹೋದಲ್ಲಿ ಅವರ ಕಿಸೆಗೆ ಹಣ ಸೇರುತ್ತ ಹೋಗುತ್ತೆ. ಕೊನೆಗೆ ಎಲ್ಲ ಸರಿ ಉತ್ತರ ಕೊಟ್ಟರೆ ೧ ಲಕ್ಷದ ಮೊತ್ತದವರೆಗೂ ಹಣ ಗೆಲ್ಲಬಹುದು. ಹೀಗೆ ಏನೋ ಇತ್ತು ಆ ಸ್ಪರ್ಧೆಯ ಶೈಲಿ. ಅಂದಿನ ದಿನ ಕಾರ್ಯಕ್ರಮದಲ್ಲಿ ಭಾಗವಹಿಸಲು ಕರೆಸಿದ್ದ ಮಂದಿ ೪ ಜನ ಕರ್ನಾಟಕದ ಪ್ರಸಿದ್ಧ ಕ್ರೀಡಾಪಟುಗಳು. ಒಬ್ಬ ಮಹಿಳೆ ಹಾಗು ಒಬ್ಬ ಮಹನೀಯ athletics ನಲ್ಲಿ ಹೆಸರುವಾಸಿಯಾಗಿದ್ದರೆ, ಇನ್ನೊಬ್ಬ weight -lifting , ಮತ್ತೊಬ್ಬ hockey-ಯಲ್ಲಿ ಹೆಸರು ಮಾಡಿದವ. ಇವರೆಲ್ಲ ಮೂಲತಹ ಕೊಡಗು, ಮಂಗಳೂರು ಹೀಗೆ ಕರ್ನಾಟಕದ ವಿವಿಧ ಭಾಗಗಳಿಂದ ಬೆಳೆದು ಬಂದವರು. ರಾಜ್ಯ ಹಾಗು ರಾಷ್ಟ್ರ ಮಟ್ಟದಲ್ಲಿ ಕೂಡ ಕರ್ನಾಟಕವನ್ನು ಪ್ರತಿನಿಧಿಸಿದವರು.  

ಕಾರ್ಯಕ್ರಮ ಶುರುವಾಯಿತು, ಎಲ್ಲರು ಅವರವರ ಪರಿಚಯ ನೀಡಿದರು, ವರ್ಷಾಳ ಪ್ರಶ್ನೆಗಳಿಗೆ ಉತ್ತರ ಕೊಡುತ್ತ ಹೋದರು. ಆದರೆ ಮೊದಲಿನಿಂದಲೂ ಏನೋ ಸರಿ ಇಲ್ಲವೆಂದು ಒಂದು ಸಣ್ಣ ಹುಳು ನನ್ನ ತಲೆಯಲ್ಲಿ ಮನೆಮಾಡಿತ್ತು. ಸ್ವಲ್ಪ ಸಮಯದ ನಂತರ ಅದು ಏನೆಂದು ತಿಳಿಯಿತು. ಕರ್ನಾಟಕದ ಹೆಮ್ಮೆಯ ಈ ಪ್ರಸಿದ್ಧ ತಾರೆಯರ ಮಾತಿನಲ್ಲಿ ಒಂದು ವಾಕ್ಯವೂ ಕೂಡ ಸಂಪೂರ್ಣವಾಗಿ ಕನ್ನಡದಲ್ಲಿ ಇರಲಿಲ್ಲ! ಅವರ ಬದುಕಿನ, ಆಟದ ಬಗ್ಗೆ ವರ್ಷ ಕೇಳುತಿದ್ದ ಪ್ರತಿಯೊಂದು ಪ್ರಶ್ನೆಗೂ ೪ ಜನ ಧೀಮಂತರು kanglish ಅಲ್ಲಿ ಉತ್ತರ ಕೊಡುತ್ತಿದ್ದರು! ಅಂದರೆ ಎರಡು ಪದ ಕನ್ನಡದಲ್ಲಿ ಶುರು ಮಾಡುವುದು ನಂತರ ನಿರಾಯಾಸವಾಗಿ ಮೆಲ್ಲಗೆ ಇಂಗ್ಲಿಷ್-ಗೆ ಜಾರಿಕೊಳ್ಳುವುದು.  ಅದು ಏನು ಕನ್ನಡದಲ್ಲಿ ಹೇಳಲು ಕಷ್ಟ ಆಗುವಂತಹ technical terms ಏನು ಅಲ್ಲ, ದಿನ ನಿತ್ಯದ ಸಾಮಾನ್ಯ ಮಾತು. ಉದಾಹರಣೆಗೆ – ವರ್ಷಾಳ ಪ್ರಶ್ನೆ ಹೀಗಿದ್ದರೆ – ‘ನೀವು ಎಷ್ಟು ವರ್ಷಗಳಿಂದ ಈ ಕ್ರೀಡೆಯಲ್ಲಿ ಆಸಕ್ತಿ ಇಟ್ಟು ಇದರ ಅಭ್ಯಾಸ ಮಾಡುತ್ತಿದ್ದೀರಿ?’ ಅವರ ಉತ್ತರ ಹೀಗಿರುತ್ತಿತ್ತು – ‘ ನಾನು ಸುಮಾರು 10 -15 years  ಇಂದ I have been practising this sport ‘ ಅಂತ! ಹೀಗೆ ಇತ್ತು ಪ್ರತಿಯೊಂದು ಮಾತು ಅವರುಗಳು ಆಡಿದ್ದು! ನಾನು ನನ್ನ ಪತಿ ಕೊನೆಗೆ ನೋಡಲಾಗದೆ/ ಕೇಳಲಾಗದೆ ಬೇರೆ ಚಾನೆಲ್-ನ ಎಡೆಗೆ ನಮ್ಮ  ಪಯಣ-ವನ್ನು ಮುಂದುವರೆಸಿದೆವು! 

ಆದರೆ ಸುಮಾರು ದಿನಗಳವರೆಗೂ ಈ ವಿಷಯ ನನ್ನನ್ನು ಕೊರೆಯುತ್ತಿತ್ತು, ಈಗಲೂ ನೆನಪಿಸಿಕೊಂಡರೆ ಬಹಳ ಬೇಸರವಾಗುತ್ತದೆ. ನಮ್ಮ ರಾಜ್ಯದ ಹಿರಿಯ ಕ್ರೀಡಾಪಟುಗಳು, ಎಲ್ಲರೂ ನೋಡುವ ಪ್ರಸಿದ್ಧ ಚಾನೆಲ್-ನ ಒಂದು ಕಾರ್ಯಕ್ರಮದಲ್ಲಿ ಹೀಗೆ ಮಾಡುವುದೇಕೆ? ಕನ್ನಡದಲ್ಲಿ ಮಾತನಾಡಲು ಅವರಿಗೆ ಕಷ್ಟವೇ? ಅವರಿಗೆ ಕನ್ನಡ ಬರುವುದಿಲ್ಲ-ವೆಂದೇನು ಇಲ್ಲ. ಹೀಗಿದ್ದಾಗ ವೀಕ್ಷಕರಿಗೆ, ಶೋತೃಗಳಿಗೆ ಅವರು ನೀಡುತ್ತಿರುವ ಸಂದೇಶವೇನು? ನನಗೂ ಗೊತ್ತು – ಈಗಿನ ದಿನಗಳಲ್ಲಿ ನಾವು ಯಾರೂ ಶುದ್ಧ ಕನ್ನಡ-ದಲ್ಲಿ ಯಾವಾಗಲೂ ಮಾತನಾಡುವುದಿಲ್ಲ – ನಾನೇನು – ನಾನು ಸದಾ ಕಾಲ ಶುದ್ಧ ಕರಾರುವಕ್ಕಾದ ಕನ್ನಡದಲ್ಲೇ ಮಾತನಾಡುತ್ತೇನೆ ಎಂದು ಹೇಳುತ್ತಿಲ್ಲ. ಮಾತನಾಡುವಾಗ ಅಲ್ಲೊಂದು ಇಲ್ಲೊಂದು ಆಂಗ್ಲ ಪದ ಉಪಯೋಗಿಸುವುದು ಈಗ ಸರ್ವೇ-ಸಾಮಾನ್ಯವಾಗಿ ಹೋಗಿದೆ. ಆದರೆ ಈ ಪ್ರತಿಷ್ಠಿತ ವ್ಯಕ್ತಿಗಳು ಮಾಡುತ್ತಿದ್ದುದು ಅದಲ್ಲ – ಪ್ರಶ್ನೆ ಕನ್ನಡದಲ್ಲಾದರೆ ಉತ್ತರ ಇಂಗ್ಲಿಷ್-ಅಲ್ಲಿ ಇರುತ್ತಿತ್ತು! ಅಂತಹ ಬಲವಂತವೇನು? ಅವರು ಭಾಗವಹಿಸುತ್ತಿದುದು ಕನ್ನಡದ ರಾಜ್ಯ ಮಟ್ಟದ ಒಂದು ಕಾರ್ಯಕ್ರಮದಲ್ಲಿ, ಯಾವುದೇ ರಾಷ್ಟ್ರೀಯ ಭಾಷಾ ಕಾರ್ಯಕ್ರಮದಲ್ಲಲ್ಲ. ಅದನ್ನು ವೀಕ್ಷಿಸುವರು ಎಲ್ಲರೂ ಕನ್ನಡ ಬಲ್ಲವರೇ ಆಗಿರುತ್ತಾರೆ ಎಂದು ಊಹಿಸುವುದರಲ್ಲಿ ಸಂಶಯವಿಲ್ಲ. ಅದು ಅಲ್ಲದೆ ಕಾರ್ಯಕ್ರಮದ ನಿರ್ವಾಹಕಳು ಅಂತಹ ಚೆನ್ನಾಗಿ ಅಚ್ಚ ಕನ್ನಡದಲ್ಲಿ ಪ್ರಶ್ನೆ ಕೇಳುತ್ತಿರುವಾಗ ನಿಮಗೆ ಅದೇ ರೀತಿ ಉತ್ತರಿಸಲು ನಷ್ಟವೇನು? 

ನಮ್ಮ ನಾಡಿನಲ್ಲಿ, ನಮ್ಮ ಜನರ ಮಧ್ಯೆ, ನಮ್ಮ ಭಾಷೆಯನ್ನು ನುಡಿಯಲು ನಮಗೆ ಕಷ್ಟವೇ? ನಮ್ಮ ಭಾಷೆಯನ್ನು ನಾವು ಪೋಷಿಸಿ, ಉಳಿಸಿ, ಬೆಳೆಸದಿದ್ದರೆ ಮತ್ತ್ಯಾರು ಬರುವರು?

ಏನಂತೀರಿ? ಇದರ ಬಗ್ಗೆ ನಿಮ್ಮದೇನು ಅನಿಸಿಕೆ?

Advertisements

8 thoughts on “ಕನ್ನಡ ಉಳಿಸಿ, ಕನ್ನಡ ಬೆಳೆಸಿ!

 1. Anu nemma lekana odi nanage mathu nanna magalige yavaglu baruva anisikege thumba holike ede antha thilieithu odi thumaba kushi ayithu navu mathanadade innu yaru mathanada beku alva?
  Siri gannadum gelge siri gannadum balge.

  • lekhana nimage ishtavaagiddu bahala santosha aaytu…neevu helodu nija… naave matadlilla andre bere avru elli mataadtaare…. modalu nammalli Kannada maataduva bhaavane hechchisabeku

 2. Nannu senior member about the age of mid fifty’s nanna kaladali computer yella eirallila nanna magala otthayadinda nannu operate madakke shuru madiddu kannada dalli bareyallu mathhe avala sahaya kelabeku sadya dalle adannu shuru madutheeni.mathe maga heggidhane nanna aashirevadagalu!

  • computer alli Kannada bareyodu bahala sulabha – Google transliteration anta ide – begane kaliyabahudu…
   maga chennagiddane – aashirvaadakke tumba dhanyavaadagalu

   • ಅನು ನಿಮ್ಮ ಸಲಹೆಯಂತೆ ನಾನು ಬರಹ ಲಿಪಿಯಲ್ಲಿ ಕನ್ನಡದಲ್ಲಿ ಬರೆಯಲು ಕಲಿತೆ ತುಂಬಾ ಧನ್ಯವಾದಗಳು.

 3. bari show off..olu bidtare…inthavaranna karesle baradu..
  annavranna nodi ivru kaliyodu yavaga..awara nalageyalli kannadada padagalla keloke ondu ananda..

 4. ಅನು ನನಗು ಸಹ ಯವಾಗಲು ಹಾಗೆ ಅನಿಸುತ್ತದೆ,ಈ ಹ್ಯೆ ಸೊಸೈಟಿ ಜನರಿಗೆ ನನಗೆ ಕನ್ನಡ ಗೊತ್ತಿಲ್ಲ ಆನ್ತ ಹೇಳಿಕ್ಕೊಳೊದು ಹೆಮ್ಮೆಯ ವಿಶಯ, ಇದು ಮೊದಲಿನಿಂದ ನಡೆದು ಬಂದ ಸಂಪ್ರದಾಯ,ನಾವು ಎನೂ ಮಾಡಲು ಸಾದ್ಯವಿಲ್ಲ.

  • ಕನ್ನಡ ಗೊತ್ತಿದ್ದರೂ ಗೊತ್ತಿಲ್ಲ ಅಂತ ಹೇಳೋದರಲ್ಲಿ ಹೆಮ್ಮೆ ಏನಿದೆ ಅಂತ ನನಗೆ ತಿಳಿಯದು! ನಾವು ನಮ್ಮ ಮಕ್ಕಳಿಗೆ ತಿಳಿ ಹೇಳಿ ಈ ತರಹದ ಸಂಪ್ರದಾಯ ಮುಂದೆ ಬೆಳಿಯದೆ ಇರುವಂತೆ ಮಾಡಬೇಕು.
   ವಸುಮತಿ ಅವರೆ, ನಿಮ್ಮ ಅಭಿಪ್ರಾಯ ಇಲ್ಲಿ ತಿಳಿದು ಬಹಳ ಸಂತೋಷವಾಯಿತು 🙂

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s