ಹಚ್ಚೇವು ಕನ್ನಡದ ದೀಪ

೩೩ ನೇ ಕನ್ನಡ ರಾಜ್ಯೋತ್ಸವದ ಸಂದರ್ಭದ ಸಂಭ್ರಮದ ನಡುವೆ ಎರಡು ದಿನಗಳಿಂದ ನನ್ನ ತಲೆಯಲ್ಲಿ ಗುನಗುತ್ತಿರುವುದು ಒಂದೇ ಹಾಡು –
“ಹಚ್ಚೇವು ಕನ್ನಡದ ದೀಪ, ಕರುನಾಡ ದೀಪ, ಸಿರಿನುಡಿಯ ದೀಪ, ಒಲವೆತ್ತಿ ತೋರುವ ದೀಪ…ಹಚ್ಚೇವು ಕನ್ನಡದ ದೀಪ” ಡಿ.ಎಸ್.ಕರ್ಕಿ ಅವರ ಈ ಕವನದ ಸಂಪೂರ್ಣ ಸಾಹಿತ್ಯ ಹೀಗಿದೆ –

ಹಚ್ಚೇವು ಕನ್ನಡದ ದೀಪ
ಕರುನಾಡ ದೀಪ ಸಿರಿನುಡಿಯ ದೀಪ
ಒಲವೆತ್ತಿ ತೋರುವ ದೀಪ

ಬಹುದಿನಗಳಿಂದ ಮೈಮರೆವೆಯಿಂದ ಕೂಡಿರುವ ಕೊಳೆಯ ಕೊಚ್ಚೇವು
ಯೆಲ್ಲೆಲ್ಲಿ ಕನ್ನಡದ ಕಂಪು ಸೂಸಲು ಅಲ್ಲಲ್ಲಿ ಕರಣ ಚಾಚೇವು

ನಡುನಾಡೆ ಇರಲಿ ಗಡಿನಾಡೆ ಇರಲಿ ಕನ್ನಡದ ಕಳೆಯ ಕೆಚ್ಚೇವು
ಮರೇತೇವು ಮರವ ತರದೇವು ಮನವ ಎರದೇವು ಒಲವ ಹಿರಿನೆನಪಾ
ನರನರವನೆಲ್ಲ ಹುರಿಗೊಳಿಸಿ ಹೊಸದು ಹಚ್ಚೇವು ಕನ್ನಡದ ದೀಪ

ಕಲ್ಪನೆಯ ಕಣ್ಣು ಹರಿವನಕ ಸಾಲು ದೀಪಗಳ ಬೆಳಕ ಬೀರೇವು
ಹಚ್ಚಿರುವ ದೀಪದಲಿ ತಾಯರೂಪ ಅಚ್ಚಳಿಯದಂತೆ ತೋರೇವು
ಒಡಲೊಳಲ ಕೆಚ್ಚಿನ ಕಿಡಿಗಳನ್ನು ಗಡಿನಾಡಿನಾಚೆ ತೊರೇವು
ಹಮ್ಮಿರಲು ಪ್ರೀತಿ ಎಲ್ಲಿಹುದು ಭೀತಿ ನಾಡೊಲವ ನೀತಿ ಹಿಡಿನೆನಪಾ
ಮನೆಮನೆಗಳಲ್ಲಿ ಮನಮನಗಳಲ್ಲಿ ಹಚ್ಚೇವು ಕನ್ನಡದ ದೀಪ

ನಮ್ಮವರು ಗಳಿಸಿದ ಹೆಸರುಳಿಸಲು ಎಲ್ಲಾರು ಒಂದುಗೂಡೇವು
ನಮ್ಮೆದೆಯ ಮಿಡಿಯುವೀ ಮಾತಿನಲ್ಲಿ ಮಾತೆಯನು ಪೂಜೆಮಾಡೇವು
ನಮ್ಮುಸಿರು ತೀಡುವೀ ನಾಡಿನಲ್ಲಿ ಮಾಂಗಲ್ಯಗೀತೆ ಹಾಡೇವು
ತೊರೆದೇವು ಮರುಳ ಕಡದೇವು ಇರುಳ ಪಡದೇವು ತಿರುಳ ಹಿರಿನೆನಪಾ
ಕರುಳೆಂಬ ಕುಡಿಗೆ ಮಿಂಚನ್ನೆ ಮುಡಿಸಿ ಹಚ್ಚೇವು ಕನ್ನಡದ ದೀಪ

ನಿಜವಾಗಲೂ, ಇದನ್ನು ಕೇಳಿದವರ ಮೈ ಮನ ರೋಮಾಂಚನಗೊಳಿಸುವ, ಅದ್ಭುತ ಪ್ರಭಾವ ಬೀರುವಂತಹ ಸಾಲುಗಳಿವು!

ಎಲ್ಲರಿಗೂ ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು! 🙂
Advertisements

3 thoughts on “ಹಚ್ಚೇವು ಕನ್ನಡದ ದೀಪ

  1. that was a nice blog!!!

    felt as nice as the afternoon rains in mysooru or as on a glorious morning on a sea shore in karwar.

    i always laughed at innovative kannada phrases in benglooru — the best one should be ‘enjaaaaaaaaaaaaay maadi’. and geez, almost eveyone (and the ones who speak other languages) seem to have taken fancy to such a k’h’annada. and even the americanoes (with brief stays in benglooru) say ‘naaaamskara saaaaaaaaaaaaaaaar, enjaaaaaaaaaaaaaaaay maaaaadi’!

    some yemmotional dejavu and something phunny, we are like this wonly!

    willy_un

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s