ಚುಟುಕಗಳು

ನಿದ್ದೆ

ಮಧ್ಯಾಹ್ನದ ಕೆಲ ತಾಸಿನಲ್ಲಿ
ಹೊಟ್ಟೆ ಪೂಜೆಯ ಮರುಕ್ಷಣ
ಕಣ್ಣಿನ ರೆಪ್ಪೆಗಳ ನಡುವೆ ನುಸುಳಿ
ಎಲ್ಲಿಂದ ಕದ್ದು ಬರುವುದೋ
ಈ ಕಳ್ಳ ನಿದ್ದೆ?!

****************************

ಕೆಲಸ

ಈ ಕೆಲಸವೂ ಒಂದು ವಿಸ್ಮಯ
ಹೆಚ್ಚಾದಾಗ, ದೂರಿನ ಸುರಿಮಳೆ
ಇಲ್ಲವಾದರೆ ಬೇಸರದ ಛಾಯೇ
ಯಾವುದು ನಮಗೆ ಸೂಕ್ತ?
ನಿರಂತರವೀ ಅಸಮಂಜಸ!

****************************

ವಿರಹ

ನಲ್ಲನೊಂದೆಡೆ
ನಲ್ಲೆಯೊಂದೆಡೆ
ಇಲ್ಲದಿದ್ದರೆ ಈ
ಚ್ಯಾಟು, ಈ-ಮೈಲು, ಮೊಬೈಲು
ಏನಾದೀತು ಇವರ ಪಾಡು?!

****************************

ಆಂಗ್ಲದಿಂದ ಕನ್ನಡಕ್ಕೆ ಟ್ರಾನ್ಸ್ಲಿಟರೇಷನ್ – ಇದು ಗೂಗಲ್-ನ ಮಾಯಾ ಲೋಕದಿಂದ ಹೊರಬಂದಿರುವ ಹೊಚ್ಚ ಹೊಸ ಪ್ರಸ್ತುತಿ.
ಇದರಲ್ಲಿ ನನಗೆ ಹೆಮ್ಮೆಯ ವಿಷಯವೇನೆಂದರೆ, ಇದನ್ನು ತಯಾರಿಸುವಲ್ಲಿ ಕೆಲಸ ಮಾಡಿದ ಗೂಗಲ್-ನ ತಂಡದ ಒಬ್ಬ ಪ್ರಮುಖ ವ್ಯಕ್ತಿ ನನ್ನ ನೆಚ್ಚಿನ ಗೆಳತಿ – ಅನುಪಮಾ! 🙂

ಇದರೊಂದಿಗೆ, ನನ್ನ ಹೃತ್ಪೂರ್ವಕ ಶುಭಾಶಯಗಳು ಅವಳಿಗೆ ಅರ್ಪಿತ.

ಈ ವಿಸ್ಮಯ ಏನೆಂದು ತಿಳಿದುಕೊಳ್ಳಲು ನೀವು ಹೋಗಬೇಕಾಗಿರುವುದು ಇಲ್ಲಿ: http://www.google.com/transliterate/indic/Kannada

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s